ಕಾಮನ್ ಸೆನ್ಸ್ ಇದ್ದರೆ ಎಂಬ ಅಡಿ ಬರಹ ಹೊಂದಿರುವ ‘ಪಾಸಿಬಲ್ ನಾಳೆಯಿಂದ ತೆರೆ ಕಾಣುತ್ತಿದೆ. ಸುಂದರ ಮೈಕಟ್ಟಿನ ಹುಡುಗ ಸೂರ್ಯ ಹಾಗೂ ಶ್ರಾವ್ಯ ಅಭಿನಯದ ಈ ‘ಪಾಸಿಬಲ್ ಎನ್ ಆರ್ ಐ ಕನ್ನಡಿಗರಾದ ಮಂಜುನಾಥ್ ಹಾಗೂ ಕಾಂತರಜ್ ಚಿತ್ರದ ನಿರ್ಮಾಪಕರುಗಳು. ಆಕಾರ ಕ್ರಿಯೇಷನ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರಾಜು ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದು. ಮೊದಲ ೪೦ ನಿಮಿಷದ ವಿಚಾರ ನಿಜ ಜೀವನದಲ್ಲಿ ನಡೆದ ಘಟನೆ. ಆನಂತರ ಕಾಮನ್ ಸೆನ್ಸ್ನಿಂದ ನಾಯಕ ತೆಗೆದುಕೊಳ್ಳುವ ನಿರ್ಧಾರ ಆಗಿರುತ್ತದೆ. ಜೀವನದಲ್ಲಿ ಪೊಲೀಸ್ ಅಧಿಕಾರಿ ಆಗಬೇಕು ಎಂಬ ಕನಸಿಟ್ಟುಕೊಂಡ ನಾಯಕ ಹಲವು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾನೆ. ಅದರಿಂದ ಆಚೆ ಬರುವುದೇ ಸಲೀ ರೋಚಕ ಕಥೆಶೀ ಚಿತ್ರಕ್ಕೆ ದಿನೇಶ್ ಕುಮಾರ್ ಅವರ ಸಂಗೀತ ಇದೆ. ಪ್ರಮೋದ್ ಛಾಯಾಗ್ರಹಣ, ತ್ರಿಭುವನ್, ಕಲೈ ನೃತ್ಯ ನಿರ್ದೇಶವಿದೆ. ಶೋಭರಾಜ್, ರಾಮಕೃಷ್ಣ ಸಹ ಪಾತ್ರವರ್ಗಲ್ಲಿ ಇದ್ದಾರೆ.